== ಸೇವಂತಿ ಸುಲಭೌಷಧಿ == ರಾಸಾಯನಿಕ ದ್ರವ್ಯಗಳಿವೆ.ಆಯುರ್ವೇದ ಶಾಸ್ತ್ರದ ಪ್ರಕಾರ ಇದು ತಂಪು ಗುಣವನ್ನು ಹೊಂದಿದೆ.ಕಹಿಸರ,ಹೃದ್ಯ, ವರ್ಣ್ಯ ಗುಣಗಳನ್ನು ಹೊಂದಿದೆ. == ಉಪಯೋಗ == ಸೇವಂತಿಯ ಹೂವುಗಳಿಂದ ಕಷಾಯ ತಯಾರಿಸಿ ೮-೧೦ ಚಮಚ ಸೇವಿಸಲು ನೀಡಿದರೆ ಹೊಟ್ಟೆ ನೋವು ಶಮನವಾಗುತ್ತದೆ. ಇದರ ಹೂವುಗಳನ್ನು ಅರೆದು ಹಾಲಿನೊಂದಿಗೆ ಬೆರೆಸಿ ಮುಖಕ್ಕೆ ಲೇಪಿಸಿಮುಖದ ಕಾಂತಿ ಹೆಚ್ಚುತ್ತದೆ. ಚರ್ಮವ್ಯಾದಿ ಉಳ್ಳವರು ಸೇವಂತಿ ಹೂವು, ಅರಸಿನ ಮತ್ತು ನಿಂಬೆರಸ ಬೆರೆಸಿ ಲೇಪಿಸಿದರೆ ತುರಿಕೆ, ಕಜ್ಜಿಗುಣವಾಗುತ್ತದೆ. ಸೇವಂತಿ ಹೂವು, ಎಲೆ ಅರೆದು ಅರಸಿನ ಹುಡಿ ಬೆರೆಸಿ ಗಾಯ ವೃಣಗಳಿಗೆ ಲೇಪಿಸಿದರೆ ಗುಣಕಾರಿ. ಗುಲಾಬಿಯ ದಳಗಳಿಂದ ಗುಲ್ ಕಂದ್ ತಯಾರಿಸುವಂತೆ, ಸೇವಂತಿಯ ಹೂವುಗಳ ದಳಗಳನ್ನು ಸಕ್ಕರೆ ಪಾಕದಲ್ಲಿ ಅದ್ದಿ ಬಿಸಿಲಿನಲ್ಲಿಟ್ಟು ಕದಡಿ ಪುನಃ ಬಿಸಿಲಿನಲ್ಲಿಟ್ಟು (೩-೪ ದಿನ) ಕೊನೆಗೆ ಜೇನು ಸೇರಿಸಿ ಗಾಳಿಯಾಡದ ಡಬ್ಬದಲ್ಲಿ ಸಂಗ್ರಹಿಸಬೇಕು. ಇದನ್ನು ಅಮರ್ಧ - ಒಂದು ಚಮಚ ಸೇವಿಸಿದರೆ ಉತ್ತಮ ಹೃದಯದ ಟಾನಿಕ್. ಮೂತ್ರ ಉರಿ, ಮೂತ್ರಕಟ್ಟು ಇರುವಾಗ ೧೦-೧೨ ಸೇವಂತಿಯ ಎಲೆಗಳನ್ನು ೨ ಕಾಳು ಮೆಣಸಿನೊಂದಿಗೆ ಅರೆದು ದಿನಕ್ಕೆ ೩ ಬಾರಿ ನೀಡುವುದರಿಂದ ಮೂತ್ರ ಉರಿ,ಮೂತ್ರಕಟ್ಟು ಶಮನವಾಗುತ್ತದೆ. ಚರ್ಮದ ಮೇಲಿನ ಕುರ, ಗುಳ್ಳೆಗಳಿಗೆ ಸೇವಂತಿಯ ಬೇರನ್ನು ಅರೆದು ಲೇಪಿಸಿದರೆ ಶಮನಕಾರಿ.